ಕನ್ನಡ ಹನಿಗವನಗಳು (Kannada Limericks)

ಕವನ ರಚನೆ ನನ್ನ ಪ್ರಿಯವಾದ ಹವ್ಯಾಸಗಳಲ್ಲಿ ಅತ್ಯ೦ತ ಪ್ರಿಯವಾದದ್ದು. ನನ್ನ ಕವನಗಳನ್ನು,ವಿಶೇಷವಾಗಿ ಹನಿಗವನಗಳನ್ನು ನಿಮಗೆ ಪರಿಚಯಿಸುವ ಹಾಗೂ ಉಣಬಡಿಸುವ ಉದ್ದೇಶದಿ೦ದ ಸೃಷ್ಟಿಯಾದದ್ದೇ ಈ ಜಾಲತಾಣ. ಓದಿ ಆಸ್ವಾದಿಸಿ...ಆನ೦ದಿಸಿ. ನಿಮ್ಮವ...ರೂಪೇಶ

Saturday, February 14, 2009

ಭಯೋತ್ಪಾದನೆ ಜಾಗೃತಿ

ಭಯೋತ್ಪಾದನೆ ಜಾಗೃತಿ ಆರಂಭವಾಗಬೇಕು
ಮನೆಮನೆಗಳಲ್ಲಿ...
ಹೌದು ಸ್ವಾಮೀ...ಯಾಕೆಂದ್ರೆ...
ನಿಜವಾದ ಭಯೋತ್ಪಾದನೆ ನಡೆಯುವುದೇ ಅಲ್ಲಿ ;)
(ಭಯೋತ್ಪಾದಕರು ಯಾರು ಅಂತ ಬೇರೆ ಬಿಡಿಸಿ ಹೇಳಬೇಕೆ?)

Monday, February 2, 2009

ವೋಲ್ವೋ

ಮಹಾನಗರ ಸಾರಿಗೆ ಸಂಸ್ಥೆಯ
ಹೆಮ್ಮೆಯ
ಘೋಷಣೆ:
"ಜನ ಓಡಾಡ್ತಾರೋ ಇಲ್ವೋ...
ನಾವಂತೂ ಓಡಿಸ್ತೀವಿ ವೋಲ್ವೋ"

Tuesday, December 11, 2007

ರಾಷ್ಟ್ರಪತಿ ಆಡಳಿತ

ಇಡೀ ದೇಶದಲ್ಲಿ ಇದ್ದರೂ
ರಾಷ್ಟ್ರಪತಿ ಆಡಳಿತ
ರಾಷ್ಟ್ರಪತಿಯ ಮನೆಯಲ್ಲಿ
ಅವರ ಪತ್ನಿಯದೇ ಆಡಳಿತ

Wednesday, November 21, 2007

ಮಾಂಸಾಹಾರಿ

ಹೆಂಡತಿಯರೆಲ್ಲರೂ ಖಂಡಿತವಾಗಿ
ಮಾಂಸಾಹಾರಿಗಳೇ...
ಪ್ರತಿನಿತ್ಯ ತಿನ್ನುತ್ತಾರಲ್ಲ
ತಂತಮ್ಮ ಗಂಡಂದಿರ ತಲೆ

Friday, November 16, 2007

ಬೆಂಗಳೂರಿನ ಭೂಮಿ

ಭಗವಂತನೆಂದ, "ಭಕ್ತ, ನಿನ್ನ ಭಕ್ತಿಗೆ ಮೆಚ್ಚಿದೆ,
ಬೇಡು ವರ"
ಅದಕ್ಕೆ ಭಕ್ತನ ಉತ್ತರ:
"ನನಗಿನ್ನೇನೂ ಬೇಡ ಸ್ವಾಮಿ
ಕರುಣಿಸಿ ಬೆಂಗಳೂರಿನಲ್ಲೊಂದು ತುಂಡು ಭೂಮಿ"

Tuesday, November 6, 2007

ಹಾಡುಗಾರ

ಸುಪ್ರಸಿದ್ಧ (?) ಹಾಡುಗಾರನಾಗುವ
ಎಲ್ಲ ಲಕ್ಷಣಗಳೂ ಇವೆ ಇವನಲ್ಲಿ
ಏಕೆಂದರೆ ಅವನ ಹಾಗೆ ಇವನು...
ಹಾಡುವುದು ಬರೀ ಮೂಗಲ್ಲಿ

Tuesday, October 9, 2007

"ಪಿತೃ" ಪಕ್ಷ

’ಕುಮಾರ’ ತನ್ನ ಅಪ್ಪನ ಮಾತನ್ನು
ಮಾಡಲಾರ ಅಲಕ್ಷ್ಯ
ಏಕೆಂದರೆ ಈಗ/ಅವನದು
"ಪಿತೃ" ಪಕ್ಷ

Friday, May 18, 2007

ಹಾರ್ಡು-ಸಾಫ್ಟು

ನನ್ ಹೆಂಡ್ತಿ ನನಗಿಂತ
ಬಲು ಜೋರು
ಯಾಕೇಂದ್ರೆ...
ಅವಳು ಹಾರ್ಡ್ ವೇರು
ನಾನು ಸಾಫ್ಟ್ ವೇರು

ಪ್ರಶ್ನೆ-ಉತ್ತರ

ಈ ಕವನ ಬರೆಯುತ್ತಿದ್ದೆ, ಆ ಕವನ ಕೇಳಿತು:
"ಏಕೆ ನನ್ನ ಮರೆತೆ?"
ನಾ ಹೇಳಿದೆ:
"ನನಗೆ ನೀನಿರುವೆ ಜೊತೆ
ಆದರೆ ನಿನಗಿದೆ ಸ೦ಗಾತಿಯ ಕೊರತೆ"

ಈ ಪ್ರಪ೦ಚ

ಅದೇ ಮೀನು, ಅದೇ ನೀರು
ಅದೇ ರೋಡು, ಅದೇ ಕಾರು;
ಲವಲವಿಕೆಯೇ ಇಲ್ಲದ
ಈ ಪ್ರಪ೦ಚದ ಹೆಸರು...
ಸ್ಕ್ರೀನ್ ಸೇವರು !