Wednesday, April 25, 2007

ಗೃಹೋಪಯೋಗಿ ವಸ್ತು

"ನಿಮ್ಮ ಅತ್ಯ೦ತ ವಿಶ್ವಾಸಾರ್ಹ
ಗೃಹೋಪಯೋಗಿ ವಸ್ತು?"
ಕೇಳಿತು ಅವಳನ್ನು ಸಮೀಕ್ಷಾ ತ೦ಡ
ತಕ್ಷಣ ಅವಳಿ೦ದ ಬ೦ತು ಉತ್ತರ:
"ನನ್ ಗ೦ಡ"

ಸ್ಥಾವರ-ಜಂಗಮ

ಸ್ಥಾವರಕ್ಕಳಿವು೦ಟು
ಜಂಗಮಕ್ಕಳಿವಿಲ್ಲ
ಆದರೂ...
ನಾನ್ಯಾಕೆ ಸವೆದೆ?
ನನ್ ಹೆಂಡ್ತಿ ಸವೆಯಲಿಲ್ಲ!

ಕಣ್ಣು ತೆರೆಸಿದ ಹೆಣ್ಣು

ನೀನು ನಿಜವಾಗಿಯೂ
ನನ್ನ ಕಣ್ಣು ತೆರೆಸಿದ ಹೆಣ್ಣು
ನಿನ್ನ ಒಡವೆ ಮಾರಿ ಬಂದ
ದುಡ್ಡಲ್ಲೇ ಆಯ್ತಲ್ಲ ನನ್ನ
ಕಣ್ಣಿನ ಪೊರೆ ಆಪರೇಷನ್ನು

ಹಾರೈಕೆ-ಕೋರಿಕೆ

ನನ್ನ ಹಾರೈಕೆ:
"ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ"
ಅವಳ ಕೋರಿಕೆ:
"ಹಾಗಾದ್ರೆ ಏಸಿ, ಮ್ಯೂಸಿಕ್ ಸಿಸ್ಟಮ್
ಬೇಗ ಬರಲಿ"

ಮಹಾಭಾರತ

ಮಹಾಭಾರತಕ್ಕೆ
ಕಾರಣಗಳು ಎರಡೆ
ಒಂದು ಶಕುನಿಯ ಪಗಡೆ
ಮತ್ತೊಂದು
ದ್ರೌಪದಿಯ ಜಡೆ

ಹೊಟೆಲಿನ ದೋಸೆ

ಹೋಟೆಲಿನ ದೋಸೆ ಅಷ್ಟೊಂದು
ರುಚಿ ಯಾಕೆ...?
ಯಾಕೇಂದ್ರೆ...
ದೋಸೆ ಹಾಕುವ ಮೊದಲು
ಬಳಸ್ತಾರಲ್ಲ ಪೊರಕೆ

Tuesday, April 10, 2007

ಉಪಗ್ರಹ

ಅವನಿಗೆ ಎಲ್ಲದಕ್ಕೂ ಬೇಕು
ಅವಳ ಅನುಗ್ರಹ
ಏಕೆ೦ದರೆ
ಅವಳು ಗ್ರಹ
ಅವನು ಅವಳ ಉಪಗ್ರಹ

ಆ ದಿನ

ಆ ದಿನವ ಆ ದೇಶ
ಮರೆಯಲಾರದಿನ್ನೆಂದೂ
ಅಂದು
ಸೆಪ್ಟೆಂಬರ್ ಹನ್ನೊಂದು

Monday, April 9, 2007

ಕೀಲುಕುದುರೆ

ಕಚೇರಿಯಲ್ಲಿ ನಾನು
ಅನಭಿಷಿಕ್ತ ದೊರೆ
ಆದರೆ
ಮನೆಯಲ್ಲಿ...?
ಅವಳ ಕೀಲುಕುದುರೆ

ಹೃದಯದ ಬಾಗಿಲು

ನೀ ನನ್ನ ಹೃದಯದ ಬಾಗಿಲು
ತೆರೆದೆ ಸುಂದರಿ
ಅದಕ್ಕೇ...
ನಿನ್ನನ್ನು ಮದುವೆಯಾದ ವರ್ಷದಲ್ಲೇ
ನನಗೆ ಓಪನ್ ಹಾರ್ಟ್ ಸರ್ಜರಿ

Thursday, April 5, 2007

ನನ್ನ ಗೆಳೆಯ

ನನ್ನ ಗೆಳೆಯ
ಅಂದು,
ಬೀದಿ ಬಸವ;
ಇಂದು,
ಉನ್ನತ ಶಿಕ್ಷಣ ಸಚಿವ

ಬ್ಲಾಗಿಗೆ ತಲೆಬಾಗು

ಮನದ ಕನ್ನಡಿ
ಈ ಬ್ಲಾಗು
ಕಿಂಚತ್ತೂ ಯೋಚಿಸದೆ
ಇದಕೆ ತಲೆಬಾಗು